ಹುಡುಕಿ

2024.05.06 S.E. il Signor Bajram Begaj, Presidente della Repubblica di Albania

ಅಲ್ಬೇನಿಯಾ ದೇಶದ ಅಧ್ಯಕ್ಷರನ್ನು ಸ್ವಾಗತಿಸಿದ ಪೋಪ್ ಫ್ರಾನ್ಸಿಸ್

ಪೋಪ್ ಫ್ರಾನ್ಸಿಸ್ ಹಾಗೂ ಅಲ್ಬೇನಿಯಾ ದೇಶದ ಅಧ್ಯಕ್ಷ ಬಜ್ರಾಮ್ ಬೆಗಾಜ್ ಅವರು ವ್ಯಾಟಿಕನ್ನಿನಲ್ಲಿ ಪರಸ್ಪರ ಭೇಟಿ ಮಾಡಿದರು. ಈ ವೇಳೆ ಅಲ್ಬೇನಿಯಾ ದೇಶದಲ್ಲಿ ಕಮ್ಯೂನಿಸ್ಟ್ ಸರ್ಕಾರ ಇದ್ದಾಗ ನಡೆದ ಕ್ರೈಸ್ತರ ಮೇಲಿನ ಹಿಂಸೆಗಳು ಹಾಗೂ ಅಲ್ಲಿನ ಜನ ಯೆಹೂದ್ಯರನ್ನು ರಕ್ಷಿಸಲು ಹೋರಾಡಿದ ಬಗೆಯ ಕುರಿತು ನೆನಪಿಸಿಕೊಂಡು, ಚರ್ಚಿಸಿದರು.

ವರದಿ: ಡೆಬೋರ ಕ್ಯಾಸ್ಟಲೀನೊ ಲುಬೋವ್, ಅಜಯ್ ಕುಮಾರ್ 

ಸೋಮವಾರ ಪೋಪ್ ಫ್ರಾನ್ಸಿಸ್ ಅಲ್ಬೇನಿಯಾ ದೇಶದ ಅಧ್ಯಕ್ಷರಾದ ಶ್ರೀ ಬಜ್ರಾಮ್ ಬೆಗಾಜ್ ಅವರನ್ನು ವ್ಯಾಟಿಕನ್ನಿಗೆ ಬರಮಾಡಿಕೊಂಡರು. ಇದೇ ಸಂದರ್ಭದಲ್ಲಿ ಅವರು ಅಲ್ಬೇನಿಯಾ ದೇಶದಲ್ಲಿ ಅಂದು ಕಮ್ಯೂನಿಸ್ಟ್ ಸರ್ಕಾರವು ನಡೆಸಿದ ಕ್ರೈಸ್ತರು ಹಾಗೂ ಯೆಹೂದ್ಯರ ಮೇಲಿನ ಹಿಂಸೆ, ಹಾಗೂ ಹೇಗೆ ಅಲ್ಬಾನಿಯನ್ ಜನರು ಯೆಹೂದ್ಯರಿಗೆ ರಕ್ಷಣೆಯನ್ನು ನೀಡಿದರು ಎಂಬ ಕುರಿತು ಚರ್ಚಿಸಿದರು.

ಪೋಪ್ ಫ್ರಾನ್ಸಿಸ್ ಅವರನ್ನು ಭೇಟಿ ಮಾಡಿದ ನಂತರ, ಅಲ್ಬೇನಿಯ ಅಧ್ಯಕ್ಷ ಬಜ್ರಾಮ್ ಬೆಗಾಜ್ ಅವರು ವ್ಯಾಟಿಕನ್ನಿನ ರಾಜ್ಯ ಕಾರ್ಯದರ್ಶಿ ಕಾರ್ಡಿನಲ್ ಪಿಯೆತ್ರೊ ಪರೋಲಿನ್ ಹಾಗೂ ವ್ಯಾಟಿಕನ್ ವಿದೇಶಾಂಗ ವ್ಯವಹಾರಗಳ ಕಾರ್ಯದರ್ಶಿ ಆರ್ಚ್'ಬಿಷಪ್ ಪೌಲ್ ರಿಚರ್ಡ್ ಗ್ಯಾಲಗರ್ ಅವರನ್ನು ಭೇಟಿ ಮಾಡಿದರು.

ವ್ಯಾಟಿಕನ್ ಮಾಧ್ಯಮ ಕಚೇರಿಯ ಪತ್ರಿಕಾ ಹೇಳಿಕೆಯ ಪ್ರಕಾರ ಉಭಯ ನಾಯಕರುಗಳ ಮಾತುಕತೆ ಫಲಪ್ರದಾಯಕವಾಗಿದ್ದು, ಧರ್ಮಸಭೆ ಹಾಗೂ ಸರ್ಕಾರದ ಕುರಿತು ಪ್ರಶ್ನೋತ್ತರಗಳು ನಡೆಯಿತು. ಇದೇ ವೇಳೆ, ಯೂರೋಪಿಯನ್ ಒಕ್ಕೂಟಕ್ಕೆ ಅಲ್ಬೇನಿಯಾ ದೇಶದ ಸದಸ್ಯತ್ವದ ಕುರಿತಂತೆ ಸಹ ಚರ್ಚೆಗಳು ನಡೆದವು.

ಮಾತುಕತೆಯ ಕೊನೆಯಲ್ಲಿ ಪೋಪ್ ಫ್ರಾನ್ಸಿಸ್ ಅವರು ಅಲ್ಬೇನಿಯಾ ದೇಶದ ಅಧ್ಯಕ್ಷರಿಗೆ ವ್ಯಾಟಿಕನ್ನಿನ ಪಾರಂಪರಿಕ ದಾಖಲೆಗಳು ಹಾಗೂ ಪ್ರತಿಮೆಗಳನ್ಹು ಉಡುಗೊರೆಯಾಗಿ ನೀಡಿದರು.

೨೦೧೪ ರಲ್ಲಿ ಪೋಪ್ ಫ್ರಾನ್ಸಿಸ್ ಅವರು ಅಲ್ಬೇನಿಯಾ ದೇಶಕ್ಕೆ ಪ್ರೇಷಿತ ಪ್ರಯಾಣವನ್ನು ಕೈಗೊಂಡಿದ್ದರು.   

06 May 2024, 13:12