ಹುಡುಕಿ

Nobel Prize winners 2023 in Stockholm

#ಮನುಷ್ಯರಾಗಿರಿ: ಮಾನವ ಭ್ರಾತೃತ್ವದ ಸಭೆಯಲ್ಲಿ ಭಾಗವಹಿಸಲಿರುವ 30 ನೊಬೆಲ್

ಮೇ 10-11 ರಂದು ಎರಡನೇ ವಿಶ್ವ ಮಾನವ ಭ್ರಾತೃತ್ವ ಸಭೆಯು ರೋಮ್ ನಗರ ಹಾಗೂ ವ್ಯಾಟಿಕನ್ ನಗರದಲ್ಲಿ ನಡೆಯಲಿದೆ, #ಮನುಷ್ಯರಾಗಿರಿ ಎಂಬುದು ಇದರ ಶೀರ್ಷಿಕೆಯಾಗಿದೆ. ಇದನ್ನು ಫ್ರತೆಲ್ಲಿ ತುತ್ತಿ ಪ್ರತಿಷ್ಟಾನವು ಆಯೋಜಿಸಿದೆ. "ಶಾಂತಿಯ ದುಂಡುಮೇಜಿನ ಸಭೆಯಲ್ಲಿ" ಸುಮಾರು ಮುವತ್ತು ನೊಬೆಲ್ ಪ್ರಶಸ್ತಿ ಪುರಸ್ಕೃತರು ಭಾಗವಹಿಸಲಿದ್ದಾರೆ.

ವರದಿ: ಮಿಕೇಲ್ ರವಿಯಾರ್ತ್, ಅಜಯ್ ಕುಮಾರ್

ಪವಿತ್ರ ಪೀಠದ ಮಾಧ್ಯಮ ಕಚೇರಿಯಲ್ಲಿ ಮಾನವ ಭ್ರಾತೃತ್ವದ ಕುರಿತ ಎರಡನೇ ವಿಶ್ವ ಸಭೆ #ಮನುಷ್ಯರಾಗಿರಿ ಎಂಬುದರ ಅನಾವರಣ ವ್ಯಾಟಿಕನ್ ನಗರದಲ್ಲಿ ಮಂಗಳವಾರ ನಡೆಯಿತು.

ಮೇ ೧೧ ಹಾಗೂ ೧೨ ರಂದು ವಿವಿಧ ವಿಷಯಗಳ ಕುರಿತು ನಡೆಯಲಿರುವ ದುಂಡು ಮೇಜಿನ ಸಭೆಗಳಲ್ಲಿ ವಿಶ್ವದ ವಿವಿಧ ಕ್ಷೇತ್ರಗಳ ಸಾಧಕರು ಭಾಗವಹಿಸಿ, ಮಾತನಾಡಲಿದ್ದಾರೆ. ಇವರು ಸೋದರ ಸಂವಾದ ಸೇರಿದಂತೆ ಜಗತ್ತನ್ನು ಭಾದಿಸುತ್ತಿರುವ ವಿವಿಧ ವಿಷಯಗಳ ಕುರಿತು ಸಮಾಲೋಚನೆಯನ್ನು ನಡೆಸಲಿದ್ದಾರೆ.

ಈ ಕಾರ್ಯಕ್ರಮದಲ್ಲಿ ನೊಬೆಲ್ ಪ್ರಶಸ್ತಿ ಪುರಸ್ಕೃತ ಪುರುಷರು, ಮಹಿಳೆಯರು, ಹಾಗೂ ಸಂಸ್ಥೆಗಳು ಭಾಗವಹಿಸಿ, ಮಾನವ ಭ್ರಾತೃತ್ವದ ಕುರಿತು ಸಂವಾದವನ್ನು ನಡೆಸಲಿವೆ. 

ವ್ಯಾಟಿಕನ್ ರಾಜ್ಯ ಕಾರ್ಯದರ್ಶಿ ಕಾರ್ಡಿನಲ್ ಪಿಯೆತ್ರೊ ಪರೋಲಿನ್ ಅವರು ಈ ಕಾರ್ಯಕ್ರಮದ "ಶಾಂತಿಯ ದುಂಡುಮೇಜು ಸಭೆ"ಯನ್ನು ಉದ್ಘಾಟಿಸಲಿದ್ದಾರೆ. 

ಇದರ ನಂತರ ಮೇ ೧೧ ರಂದು ಇವರು ಪೋಪ್ ಫ್ರಾನ್ಸಿಸ್ ಅವರನ್ನು ವ್ಯಾಟಿಕನ್ ನಗರದಲ್ಲಿ ಭೇಟಿ ಮಾಡಲಿದ್ದು, ಈ ಭೇಟಿಯ ನಂತರ ಇಟಲಿಯ ಅಧ್ಯಕ್ಷ ಸರ್ಜಿಯೋ ಮತ್ತರೆಲ್ಲ ಅವರನ್ನು  ಭೇಟಿ ಮಾಡಲಿದ್ದಾರೆ. 

07 May 2024, 17:31