ಹುಡುಕಿ

ಅಧ್ಯಕ್ಷೀಯ ಚುನಾವಣೆಗಳಿಗೆ ಮತದಾನ ಮಾಡಿದ ಪನಾಮ ಜನತೆ

ಪನಾಮ ದೇಶದ ಹಿಂದಿನ ಅಧ್ಯಕ್ಷರು ಹಣ ದುರುಪಯೋಗ ಪ್ರಕರಣದಲ್ಲಿ ಸಿಲುಕಿ, ಜೈಲು ಸೇರಿದ ನಂತರ ನಡೆಯುತ್ತಿರುವ ಚುನಾವಣೆಗಳು ಇದಾಗಿದ್ದು, ಪನಾಮ ದೇಶದ ಜನತೆ ನೂತನ ಅಧ್ಯಕ್ಷರನ್ನು ಆರಿಸಿಕೊಳ್ಳುವಲ್ಲಿ ಹೆಜ್ಜೆಯನ್ನು ಇಟ್ಟಿದೆ. ಪನಾಮ ದೇಶದ ಅಧ್ಯಕ್ಷ ಪದವಿಗೆ ಇಂದು ಚುನಾವಣೆಗಳು ನಡೆದಿದೆ.

ವರದಿ:ಜೇಮ್ಸ್ ಬ್ಲಿಯರ್ಸ್, ಅಜಯ್ ಕುಮಾರ್

ಮಾಜಿ ವಿದೇಶಾಂಗ ಸಚಿವ, ಮಾಜಿ ರಕ್ಷಣಾ ಮಂತ್ರಿ ಹಾಗೂ ಕಾನೂನು ಕಾರ್ಯದರ್ಶಿಯಾಗಿದ್ದ ಜೋಸ್ ರೌಲ್ ಮುಲಿನೊ ಅವರು ಅಧ್ಯಕ್ಷೀಯ ಚುನಾವಣೆಗಳಲ್ಲಿ ಸ್ಪರ್ಧಿಸುತ್ತಿದ್ದಾರೆ. ಹಿಂದಿನ ಅಧ್ಯಕ್ಷ ರಿಕಾರ್ಡೋ ಮಾರ್ಟಿನೆಲ್ಲಿ ಅವರು ಹಣ ದುರುಪಯೋಗ ಪ್ರಕರಣದಲ್ಲಿ ಸಿಲುಕಿ ಜೈಲು ಪಾಲಾದ ನಂತರ ನಡೆಯುತ್ತಿರುವ ಚುನಾವಣೆಗಳು ಇದಾಗಿವೆ. ಈ ಪ್ರಕರಣದಲ್ಲಿ ಅವರಿಗೆ 11 ವರ್ಷಗಳ ಕಾಲ ಶಿಕ್ಷೆಯಾಗಿದ್ದು, ಅದರ ವಿರುದ್ಧ ಅವರು ಮೇಲ್ಮನೆಗೆ ಸಲ್ಲಿಸಿದ್ದಾರೆ. ಪ್ರಸ್ತುತ ಅವರು ನಿಕ್ರಾಗುವ ದೇಶದ ರಾಯಭಾರ ಕಚೇರಿಯಲ್ಲಿ ಆಶ್ರಯವನ್ನು ಪಡೆದಿದ್ದು, ಸದರಿ ದೇಶವು ಅವರಿಗೆ ಆಶ್ರಯವನ್ನು ನೀಡಿದೆ.

ಚುನಾವಣಾ ನ್ಯಾಯ ಮಂಡಳಿಯು ಮುಲಿನೋ ಅವರು ಚುನಾವಣೆಯಲ್ಲಿ ಸ್ಪರ್ಧಿಸುವುದನ್ನು ತಡೆಹಿಡಿದಿತ್ತು. ಆದರೆ ಪನಾ ಭಾದ ಸರ್ವೋಚ್ಚ ನ್ಯಾಯಾಲಯವು ಚುನಾವಣಾ ನ್ಯಾಯ ಮಂಡಳಿಯ ಆದೇಶವನ್ನು ರದ್ದು ಮಾಡಿತ್ತು. ಹೀಗೆ ಆದೇಶವನ್ನು ರದ್ದು ಮಾಡುವ ಮೂಲಕ ಮುಲಿನೋ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಮಾಡಿಕೊಟ್ಟಿತು.

ದೇಶದಾದ್ಯಂತ ಮುಲಿನೋ ಅವರಿಗೆ ಶೇಕಡ 30ರಷ್ಟು ಬೆಂಬಲವು ವ್ಯಕ್ತವಾಗಿದ್ದು, ಅವರ ಪ್ರತಿಸ್ಪರ್ಧಿಗೆ ಶೇಕಡ ಐದುರಷ್ಟು ಬೆಂಬಲವು ಮಾತ್ರ ವ್ಯಕ್ತವಾಗಿದೆ. ಕೊನೆಯ ಕ್ಷಣದಲ್ಲಿ ಅಧ್ಯಕ್ಷೀಯ ಅಭ್ಯರ್ಥಿಯಾದ ಮುಲಿನೋ ಈ ಚುನಾವಣೆಯಲ್ಲಿ ಗೆಲ್ಲುವುದು ದೃಢವಾಗಿದೆ. ಈ ಸಂದರ್ಭದಲ್ಲಿ ಎಲ್ಲಾ ಪಕ್ಷಗಳ ಎಲ್ಲಾ ಅಭ್ಯರ್ಥಿಗಳು ಭ್ರಷ್ಟಾಚಾರ ನಿರ್ಮೂಲನೆಯ ಕುರಿತು ಮಾತನಾಡಿದ್ದಾರೆ.

ಅಲ್ಲಿನ ಕಥೋಲಿಕ ಧರ್ಮಧ್ಯಕ್ಷರುಗಳ ಮಂಡಳಿಯು ಸ್ವಾತಂತ್ರದ ಹಾಗೂ ವಿವೇಚನಾ ಶಕ್ತಿಯುಳ್ಳ ಅಭ್ಯರ್ಥಿಗೆ ಮತವನ್ನು ಹಾಕಬೇಕೆಂದು ಕರೆ ನೀಡಿದ್ದಾರೆ.

06 May 2024, 10:46