ಹುಡುಕಿ

ರಷ್ಯಾ-ಉಕ್ರೇನ್ ಯುಧ್ಧ: ಯುದ್ಧ ಕೈದಿಗಳನ್ನು ನಡೆಸಿಕೊಳ್ಳುತ್ತಿರುವ ಕುರಿತು ಹೆಚ್ಚುತ್ತಿರುವ ಕಳವಳ

ರಷ್ಯಾ-ಉಕ್ರೇನ್ ಯುದ್ಧ ಕೈದಿಗಳನ್ನು ನಡೆಸಿಕೊಳ್ಳುತ್ತಿರುವ ಕುರಿತು ಕಳವಳ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ರಷ್ಯಾ-ಉಕ್ರೇನ್ ಯುದ್ಧದ ಯುದ್ಧ ಕೈದಿಗಳನ್ನು ವಿನಿಮಯ ಮಾಡಿಕೊಳ್ಳುವ ನಿಟ್ಟಿನಲ್ಲಿ ಮಧ್ಯಪ್ರವೇಶಕ್ಕೆ ವ್ಯಾಟಿಕನ್ ಸಿದ್ಧವಿದೆ ಎಂಬ ಪೋಪ್ ಫ್ರಾನ್ಸಿಸ್ ಅವರ ಹೇಳಿಕೆ ಬಂದಿದೆ.

ವರದಿ: ಸ್ಟೆಫಾನ್ ಜೆ. ಬೊಸ್, ಅಜಯ್ ಕುಮಾರ್

ಎರಡು ವರ್ಷದ ಹಿಂದೆ ಮಾಸ್ಕೋ ಉಕ್ರೇನ್ ದೇಶದ ಮೇಲೆ ಪೂರ್ಣ ಪ್ರಮಾಣದ ಯುದ್ಧವನ್ನು ಘೋಷಿಸಿದ ನಂತರ, ಸುಮಾರು ಮೂರು ಸಾವಿರ ಉಕ್ರೇನ್ ಯುದ್ಧ ಕೈದಿಗಳನ್ನು ಬಿಡುಗಡೆ ಮಾಡಿ, ಕೈದಿಗಳ ವಿನಿಮಯ ಮಾಡಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅದಾಗ್ಯೂ, ಇನ್ನೂ ಹತ್ತು ಸಾವಿರಕ್ಕೂ ಹೆಚ್ಚು ಉಕ್ರೇನ್ ಯುದ್ಧ ಕೈದಿಗಳು ರಷ್ಯಾ ದೇಶದ ವಶದಲ್ಲಿದ್ದು, ಅಲ್ಲಿ ಅವರ ಪರಿಸ್ಥಿತಿ ಶೋಚನೀಯವಾಗಿದೆ ಎಂದು ವಿಶ್ವಸಂಸ್ಥೆಯ ವರದಿಯೊಂದಿ ಬಹಿರಂಗಪಡಿಸಿದೆ.

ಉಕ್ರೇನ್ ಸೇನೆಯೂ ಸಹ ರಷ್ಯಾ ಯುದ್ಧ ಕೈದಿಗಳ ಮೇಲೆ ಹಿಂಸಾಚಾರ ನಡೆಸಿರುವ ಘಟನೆಗಳು ನಡೆದಿವೆ ಎಂದೂ ಸಹ ವರದಿಯಾಗಿದೆ.

ಹೌದು, ಉಕ್ರೇನ್ ಅಧಿಕಾರಿಗಳು ತಮ್ಮಲ್ಲಿರುವ ರಷ್ಯಾ ದೇಶದ ಯುದ್ಧ ಕೈದಿಗಳನ್ನು ಇಟ್ಟಿರುವ ಕ್ಯಾಂಪುಗಳಿಗೆ ಅಂತರಾಷ್ಟ್ರೀಯ ಮಾನವ ಹಕ್ಕು ಕಾರ್ಯಕರ್ತರು ಸೇರಿದಂತೆ ಮಾಧ್ಯಮಗಳು ಹಾಗೂ ಪತ್ರಕರ್ತರಿಗೆ ಹೆಚ್ಚಿನ ಅವಕಾಶವನ್ನು ಕಲ್ಪಿಸಿದ್ದಾರೆ. ಇದೂ ಸಹ ಅಲ್ಲಿ ಹಿಂಸಾಚಾರದಂತಹ ಘಟನೆಗಳನ್ನು ತಪ್ಪಿಸಿರಬಹುದು ಎಂದು ಅಂದಾಜಿಸಲಾಗಿದೆ. ಅದಾಗ್ಯೂ, ಈ ಯುದ್ಧ ಕೈದಿಗಳಿಗೆ ಉಕ್ರೇನ್ ದೇಶವು ಕಲ್ಪಿಸಿರುವ ಕ್ರಮಗಳು ಹೆಚ್ಚು ಸರಿಯಾಗಿಲ್ಲ ಎಂದು ವಿಶ್ವಸಂಸ್ಥೆಯು ಹೇಳಿದೆ.

ಪದೇ ಪದೇ ತಲೆಗೆ ಹೊಡೆತ ಬೀಳುವ ಕಾರಣ ಹಲವಾರು ಕೈದಿಗಳು "ಬ್ಲಾಕ್ ಔಟ್" ಆಗುವ ಅಥವಾ ಪ್ರಜ್ಞೆ ತಪ್ಪಿ ಬೀಳುತ್ತಿರುವ ಘಟನೆಗಳು ವರದಿಯಾಗಿವೆ. ಇನ್ನು, ರಷ್ಯಾ ಕ್ಯಾಂಪಿನಲ್ಲಿರುವ ಉಕ್ರೇನ್ ಯುದ್ಧ ಕೈದಿಗಳ ಪರಿಸ್ಥಿತಿ ಚಿಂತಾಜನಕವಾಗಿದೆ ಎಂದು ವರದಿಯಾಗಿದೆ. ಅಲ್ಲಿ ಅವರು ವಿವಿಧ ರೀತಿಯ ದೈಹಿಕ ಹಾಗೂ ಮಾನಸಿಕ ಕಾಯಿಲೆಗಳಿಂದ ಬಳಲುತ್ತಿರುವುದು ಬೆಳಕಿಗೆ ಬಂದಿದೆ. 

ಉಕ್ರೇನ್ ದೇಶದ ಎರಡನೇ ದೊಡ್ಡ ನಗರವಾದ ಕಾರ್ಕೀವ್ ನಗರದ ಮೇಲೆ ಪೂರ್ಣ ಪ್ರಮಾಣದ ದಾಳಿಯನ್ನು ನಡೆಸುತ್ತಿರುವ ರಷ್ಯಾ, ಇನ್ನೇನು ಕೆಲವೇ ದಿನಗಳಲ್ಲಿ ಅದನ್ನು ವಶಪಡಿಸಿಕೊಳ್ಳುವ ಸಂಭವವಿದೆ. ಹೀಗೆ ಅದು ವಶಪಡಿಸಿಕೊಂಡ ನಂತರ ಯುದ್ಧ ಕೈದಿಗಳ ಸಂಖ್ಯೆ ಹೆಚ್ಚಾಗಲಿದೆ ಎಂದು ಅಂದಾಜಿಸಲಾಗಿದೆ.     

     

12 May 2024, 18:48